ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಪರಂಪರೆಯ ಯಕ್ಷಗಾನ ಹಾಗೂ ಸೃಜನ ಶೀಲತೆ

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ಜೂನ್ 28 , 2013

ಇದು ಬಹಳ ಚರ್ಚೆಯಲ್ಲಿರುವ ವಿಷಯ. ಮೊದಲಾಗಿ ಈ ಪರಂಪರೆಯ ಆರಂಭ ಎಲ್ಲಿಂದ ಆಯಿತು ಒಂದು ಕಾಲದಿಂದ ಒಂದು ಕ್ರಮ ಬೆಳೆದು ಬಂದು ಮುಂದಿನ ತಲೆಮಾರಿಗೆ ಅದುವೇ ಒಂದು ಪರಂಪರೆಇದುಯಾಯಿತು. ಯಕ್ಷಗಾನದಲ್ಲೂ ಅದೇ ಪರಂಪರೆ ಶುರುವಾಯಿತು. ಅ ಕ್ಷೇತ್ರದ ಯುಗ ಪ್ರವರ್ತಕರಿಂದ ಬದಲಾವಣೆಯನ್ನು ಕಂಡು ಬೆಳೆಯುತ್ತಾ ಬಂತು.ಹೀಗಿದ್ದರೂ ಪ್ರತಿಯೊಂದು ಆವಿಷ್ಕಾರವಾದಾಗಲೂ ವಿವಾದಗಳು ಅದರ ಜತೆಯಲ್ಲೇ ಉಂಟಾಗಿತ್ತು.

ಇಂದು ಯಾವುದೇ ಕಲೆಗೆ ನವೀಕರಣಕ್ಕೆ ಮಾದರಿಯಾದ ಕ್ಷೇತ್ರ ಚಲನ ಚಿತ್ರ.. ಈ ಸಿನಿಮ ಎಂಬ ಕ್ಷೇತ್ರ ಹಲವು ಕಲೆಯ ಬದಲಾವಣೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ಮೊದಲು ಭಾರತಿಯ ಸಿನಿಮಾ, ಕಥೆ ಪೌರಾಣಿಕ ಘಟನೆಗಳನ್ನೇ ಅವಲಂಬಿಸಿತ್ತು.

ಬರಬರುತ್ತ ಅದರಲ್ಲಿ ಹಲವು ಆವಿಷ್ಕಾರಗಳದುವು. ನಿಜ ಜೀವನದ ಪ್ರತಿಫಲನವೇ ಅಲ್ಲಿ ಗೋಚರಿಸಿತು. ಹೀಗಿದ್ದರೂ ಅದಕ್ಕೆ ಯಾವುದೇ ಸಾಂಪ್ರದಾಯಿಕ ಚೌಕಟ್ಟು ಇಲ್ಲದೆ ಆ ಬದಲಾವಣೆ ತಪ್ಪು ಎಂದು ಎಲ್ಲೂ ಅನಿಸೋದಿಲ್ಲ.ನಾಗರಿಕ ಆವಿಷ್ಕಾರದ ಕಲೆ ಸಿನಿಮ ಆಗಿರುವುದರಿಂದ ಅಲ್ಲಿ ಯಾವುದೇ ಬದಲಾವಣೆ ಅದರೂ ಅದು ಗೌಣವಾಗಿಬಿಡುತ್ತದೆ. ಮೊದಲು ಶಾಸ್ತಿಯ ಸಂಗೀತ ಭರತನಾಟ್ಯ ಅಥವಾ ಇನ್ನಿತರ ಸಾಂಪ್ರದಾಯಿಕ ಕಲೆ ಮುಖ್ಯ ವಸ್ತುಗಳಾಗಿದ್ದರೆ ಇಂದು ಪಾಪ್ ಸಂಗೀತ ಕ್ಯಾಬರೆ ಬ್ರೇಕ್ ಡಾನ್ಸ್ ಇಂದಿನ ನಿತ್ಯ ಸರಕುಗಳು. ಅದು ಅ ಕ್ಷೇತ್ರ ಹೊಂದಿಕೆಯಾಗಲೂಬಹುದು.ಇಂತಹ ಬದಲಾವಣೆ ಯಕ್ಷಗಾನದಲ್ಲಿ ನಾವು ನಿರೀಕ್ಷಿಸಬಹುದೇ? ಪರಂಪರೆಯ ಯಕ್ಷಗಾನದಲ್ಲಿ ಆವಿಷ್ಕಾರ ಆಗಬೇಕು ಜನಪ್ರಿಯತೆಗಳಿಸಬೇಕೆಂದು ಮಸಾಲೆ ಸರಕುಗಳನ್ನು ಸೇರಿಸಬಹುದೇ?


ಚೆಂಡೆ ವಾದಕ ಪ್ಯಾಂಟು ಕೋಟು ಸೂಟು ಹಾಕಿ ನಿಂತು ಕೊಂಡರೆ ಹೇಗಿರಬಹುದು. ಇಂಥ ಹಲವು ಆಭಾಸಗಳನ್ನು ಹುಟ್ಟು ಹಾಕಲು ಪರಂಪರೆ ವಿರೋಧಿಗಳು ಕೊಡುವ ಕ್ಷುಲ್ಲಕ ಕಾರಣಗಳು ಹಲವಿದೆ. ಮೊದಲು ಪಂಜಿನ ಬೆಳಕಲ್ಲೇ ಯಕ್ಷಗಾನ ಪ್ರದರ್ಶನ ವಾಗುತಿತ್ತು. ಮೊದಲು ಬೆಳಗ್ಗೆವರೆಗೆ ಇದ್ದರೆ ಈಗ ಅದಕ್ಕೂ ಕಾಲ ಮಿತಿ ಬಂದಿದೆ. ಹಾಗಿರುವಾಗ ಪರಂಪರೆ ಎಲ್ಲಿ ಉಳಿಯಿತು? ಮೊದಲು ಪೂರ್ವರಂಗ ಏನಿತ್ತೋ ಅ ಅವಧಿಯಸ್ಟು ಹೊತ್ತು ಯಕ್ಷಗಾನ ಪ್ರದರ್ಶನ ಸಹ ಇರುವುದಿಲ್ಲ. ಹೀಗಿರುವಾಗ ಪರಂಪರೆಯನ್ನು ಜೋತುಕೊಂಡರೆ ಯಕ್ಷಗಾನ ನಡೆಯುವುದು ಅಗಲಿ ಅ ಕಲೆಯ ಉಳಿವು ಹಾಗು ಬೆಳವಣಿಗೆ ಸಾಧ್ಯವಿಲ್ಲ ಎಂಬ ಮಾತನ್ನು ಆಡುವಾಗ ಏನು ಹೇಳಬಹುದು?

ಯಕ್ಷಗಾನ ಎಂದರೆ ಪರಂಪರೆಯ ಕಲೆ ಅದು ಪರಂಪರೆಯನ್ನೇ ಮೈಗೂಡಿಸಿಕೊಂಡಿದ್ದರೆ ಚಂದವಲ್ಲವೇ? ಅದರ ಚೌಕಟ್ಟನ್ನು ಮೀರಿ ಆಭಾಸಗಳನ್ನು ಪ್ರಯೋಗಿಸಿದರೆ ಅದು ಸೃಜನ ಶೀಲತೆ ಎಂದು ಕರೆಯಬಹುದೇ? ಕೆಲೆಗೆ ಪೂರಕ ಎಂದು ಹೇಳಬಹುದೇ.. ಇದೆಲ್ಲ ಹಲವು ಬಾರಿ ವಿದ್ವಾಂಸ ವಿಮರ್ಶಕರಿಂದ ಚರ್ಚಿತವಾಗಿರುವ ವಿಚಾರಗಳು. ಸಂಪ್ರದಾಯ ಪರಂಪರೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು ಬದುಕು ರೂಪಿತವಗಿರುವುದೇ ಈ ತಳಹದಿಯಲ್ಲಿ. ಮನೆಯ ಯಾವುದೇ ಭಾಗದಲ್ಲಿ ಕುಳಿತು ಊಟವೋ ಉಪಹರವೋ ಮಾಡುವ ನಾವು ಅ ಕೆಲಸವನ್ನು ಮಾಡಬಹುದೇ ಎಲ್ಲ ಕಡೆಯೂ ಮಾಡಬಹುದೇ ? ಇಲ್ಲಿ ಪರಂಪರೆ ಮೀರಿ ನಾವು ಹೋಗಬಹುದೇ? ಹಾಗಿರುವಾಗ ಯಾವ ಕ್ಷೇತ್ರಕ್ಕೆ ಯಾವುದು ಸೂಕ್ತವೋ ಅದನ್ನು ಆಯ್ಕೆ ಮಾಡಬೇಕು. ಸಂಪ್ರದಾಯದಲ್ಲಿ ಎಷ್ಟು ಆಚರಿಸಲ್ಪಡುತ್ತದೆ ಎಂಬ ಮಾನದಂಡ ಇಲ್ಲಿ ಅನಾವಶ್ಯಕ. ಕಲಾವಿದರ ಜೀವನ ನಿರ್ವಹಣೆಯೋ ಅಥವಾ ಇನ್ನಿತರ ವ್ಯಾಪಾರಿ ಚಿಂತನೆಯಾ ಬಗ್ಗೆ ಯೋಚಿಸುವಾಗ ಅಂಥಹ ಕಲೆಯ ಆಯಾಮಕ್ಕೆ ಹೊಸ ನಾಮಕರಣ ಮಾಡಿದರೆ ಸೂಕ್ತ.

ಯಕ್ಷಗಾನ ಒಂದು ಕಲೆ ಎಂಬ ಮಾತ್ರಕ್ಕೆ ಜನ ಮನ್ನಣೆ ಪದೆದದ್ದಲ್ಲ. ಇಂದಿಗೂ ದೇವಿ ಮಹಾತ್ಮೆಯ ದೇವಿ ವೇಶ ನೋಡುವಾಗ ಕೆಲವರು ಭಕ್ತಿ ಭಯದಿಂದ ಭಾವುಕಾಗುವುದುಂಟು. ಕಟೀಲು ಮೇಳ ಮುಂದಿನ 25 ವರ್ಷಗಳಿಗೂ ಹರಿಕೆ ಆಟಕ್ಕೆ ನಿಗದಿಯಾಗಿದ್ದರೆ.. ಅದು ಕೇವಲ ಕಲೆಯ ಮನ್ನಣೆ ಎಂದು ಹೇಳುವ ಹಾಗಿಲ್ಲ. ಹಾಗಿರುವಾಗ ಇನ್ನೂ ಯಕ್ಷಗಾನ ಎಂಬುದು ಸಂಪ್ರದಾಯ ಹಾಗು ಆರಾಧನ ಭಾಗವಾಗಿ ಬೆಳದು ಬಂದಿರುವಾಗ ಮತ್ತು ಪುರಾಣಿಕ ಕಥಾನಕಗಳು ಪಂಚವಟಿ, ಕುಮಾರ ವಿಜಯ, ಕೃಷ್ಣ ಸಂಧಾನ ಇನ್ನೂ ಹಲವು ಪ್ರಸಂಗಗಳು ಇನ್ನೂ ಬೇರೆಲ್ಲ ಕಥೆಗಳಿಗಿಂತ ಅತಿ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುವ ಇಂತಹ ಕಾಲದಲ್ಲಿ ಪರಂಪರೆಯಲ್ಲಿ ಯಾವುದೂ ಇಲ್ಲ ಎಂದು ಸೃಜನ ಶೀಲತೆ ಎಂದು ಕರೆದು ಅದನ್ನು ಸಾಕಾರಗೊಳಿಸುವ ಅಗತ್ಯ ಇದೆಯೇ?

ದೀವಟಿಗೆ ಯಕ್ಷಗಾನ
ಮೊದಲು ಪಂಜಿನ ಬೆಳಕಲ್ಲಿ ಆಟ ನಡೆಯುತ್ತಿದ್ದರೆ ಇಂದು ಜಗಮಗಿಸುವ ಬೆಳಕು. ಸಾಪ್ರದಾಯಿಕ ಯಕ್ಷಗಾನದಲ್ಲಿ ಮೊದಲು ಶ್ರುತಿಗೆ ತಬೂರಿಯನ್ನು ಉಪಯೋಗಿಸುತ್ತಿದ್ದರೆ ಈಗ ಹಾರ್ಮೋನಿಯಮ್ ನಂತರ ಶ್ರುತಿ ಪೆಟ್ಟಿಗೆ.. ಈ ಪರಿಷ್ಕಾರಗಳೆಲ್ಲ ಮೂಲ ಸಂಸ್ಕಾರಕ್ಕೆ ಹೆಚ್ಚು ಪ್ರಭಾವವನ್ನುಂಟು ಮಾಡಲಿಲ್ಲ. ಹಾಗೆಂದು ಯಕ್ಷಗಾನದ ಮೂಲ ಸತ್ವವನ್ನು ದೂರ ಇಡುವ ಸೃಜನ ಶೀಲತೆ ಇಂದು ತನ್ನದೇ ಪ್ರಭಾವವನ್ನು ಬೀರಿದೆ. ಜನಪ್ರಿಯತೆಯೋ ಅಥವಾ ವಾಣಿಜ್ಯ ಕಾರಣವೋ ಏನೆ ಆಗಿದ್ದರೂ ಹೊಸತೊಂದು ಆಯಾಮ ಉಂಟು ಮಾಡಿ ಹೊಸ ಹೆಸರನ್ನು ನೀಡಿ ಯಕ್ಷಗಾನವೆಂಬ ಪರಿಧಿಯಿಂದ ಸಂಪೂರ್ಣ ಹೊರಬಂದು ಬೇರೆಯೇ ಹೆಸರನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ?

ಸೃಜನ ಶೀಲತೆ ಹೆಸರಲ್ಲಿ ಜನಪ್ರಿಯಗೊಳಿಸುವ ಹಲವು ಸರಕುಗಳನ್ನು ನಾವು ನೋಡಬಹುದು. ಯಕ್ಷಗಾನ ಪರಮಪರೆಯ ಪ್ರಸಂಗಗಳಲ್ಲಿ ಅನಗತ್ಯ ಸನ್ನಿವೇಶಗಳನ್ನು ತುರುಕುವುದು. ಇದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ತ್ರಿಪುರ ಮಥತನದ ಆಟದೊಳಗಣ ಆಟ, ಇನ್ನೊಂದು ನಾನು ಉಲ್ಲೇಖಿಸಬಯಸುವುದು ಇಂದ್ರನಂದನ ವಾಲಿ ಎಮ್ಬ ಒಂದು ಪ್ರಸಂಗ ಇತ್ತೀಚಿಗೆ ನೋಡಿದ್ದೇ. ಈ ಪ್ರಸಂಗ ಸಂಪೂರ್ಣ ವಾಲಿಯ ಸಮಗ್ರ ಚಿತ್ರವನ್ನು ಹೊಂದಿದ ಪ್ರಸಂಗ. ವಾಲಿ ಜನ್ಮದಿಂದ ತೊಡಗಿ ವಾಲಿ ಮೋಕ್ಷದ ವರೆಗಿನ ಪ್ರಸಂಗ. ಇದರಲ್ಲಿ ಒಂದು ಸನ್ನಿವೇಶ.. ಹನುಮಂತನ ತಾಯಿ ಅಂಜನ ದೇವಿ ಕಲ್ಯಾಣ. ಆಕೆಯ ಪ್ರಣಯ. ಸನ್ನಿವೇಶ. ಈಗಿನ ಕಾಲಮಿತಿಯ 4 ಗಂಟೆಯ ಅವದಿಯ ಯಕ್ಷಗಾನದಲ್ಲಿ ಈ ಕಲ್ಯಾಣ ಪ್ರಣಯ ಪ್ರಸಂಗಕ್ಕೆ ಬರೋಬರಿ ಒಂದು ಗಂಟೆ ಮೀಸಲು ಇಟ್ಟದ್ದು. ಮೇಳದ ಪುಂಡು ವೇಷಧಾರಿಗೆ ಯಾವುದೇ ವೇಷ ಇಲ್ಲದುದಕ್ಕೆ ಈ ಬೆಳವಣಿಗೆ . ಹೇಗಿದೆ? ವಾಲಿಯ ಬಹು ಮುಖ್ಯ ಸಂನಿವೆಶಗಳಾದ ರಾವಣ ಗರ್ವಭಂಗ .. ಸಮುದ್ರಮಥನ ಸನ್ನಿವೇಶ ಇವುಗಳಿಗೆ ಸಮಯವೇ ಇಲ್ಲ.. ಎಂಥ ಸೃಜನ ಶೀಲತೆ ಇದು ? ಒಂದು ಪ್ರಸಂಗದಲ್ಲಿ ಯಾವ ಸನ್ನಿವೇಶಕ್ಕೆ ಹೆಚ್ಚು ಮಹತ್ವ ಕೊಡಬೇಕೋ ಅದಕ್ಕೆ ಕೊಡದೆ ಕೇವಲ ಜನಪ್ರಿಯತೆಯನ್ನು ದ್ರಿಷ್ಟಿಯಲ್ಲಿತ್ತುಕೊಂಡು ಈ ಸೃಜನ ಶೀಲತೆ ಬೇಕಾಗಿದೆಯೇ?



ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ